![](file:///C:/DOCUME%7E1/acer/LOCALS%7E1/Temp/moz-screenshot.jpg)
![](file:///C:/DOCUME%7E1/acer/LOCALS%7E1/Temp/moz-screenshot-1.jpg)
![](file:///C:/DOCUME%7E1/acer/LOCALS%7E1/Temp/moz-screenshot-2.jpg)
ಕರ್ನಾಟಕದಲ್ಲಿ ಮತಾಂತರ ನಡೆಸಲು ನ್ಯೂಲೈಫ್ ಎಂಬ ಸಂಘಟನೆ ಕೆಲಸ ಮಾಡುತ್ತಿದೆ. ಅದಕ್ಕೂ ತಮಗೂ ಸಂಬಂಧ ಇದೆ ಎನ್ನುವುದನ್ನು ಕ್ರಿಶ್ಚಿಯನ್ನರು ಒಪ್ಪುತ್ತಿಲ್ಲ. ನ್ಯೂಲೈಫ್ನ ಕಟ್ಟಡಗಳ ಮೇಲೆ ದಾಳಿ ಮಾಡಿದ ಸಂಘಟನೆಗಳಿಗೂ ಬಿಜೆಪಿ ಪಕ್ಷಕ್ಕೂ ಸಂಬಂಧವಿಲ್ಲ ಎನ್ನುವುದು ಬಿಜೆಪಿ ಹೇಳಿಕೆ!ಇದು ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವ ತಂತ್ರವೇ?
ನನ್ನ ಅಂಗಿ ಮೇಲೆ ನಿಮ್ಮ ಕಣ್ಯಾಕೆ?:ಶಿವರಾಜ್ ಪಾಟೀಲ್
ದೆಹಲಿಯಲ್ಲಿ ಭಯೋತ್ಪಾದಕರ ದಾಳಿಯಾದ ದಿನ ಸ್ಥಳಕ್ಕೆ ಭೇಟಿಯಿತ್ತ ಗೃಹ ಸಚಿವ ಶಿವರಾಜ ಪಾಟೀಲ್ ಮೂರು ಸಲ ತಮ ಉಡುಪು ಬದಲಿಸಿದ್ದರು ಅನ್ನುವುದನ್ನು ಪತ್ರಕರ್ತರು ವರದಿ ಮಾಡಿದ್ದು,ಅದಕ್ಕೆ ಮಹತ್ತ್ವ ನೀಡಿದ್ದು ಮಂತ್ರಿಮಹೋದಯರಿಗೆ ಬೇಸರ ತಂದಿದೆ. ನನಗೆ ಬೇಕಾದ ಉಡುಪು ಧರಿಸಲು ಅವಕಾಶವಿಲ್ಲವೇ? ಉಡುಪಿನ ಬಗ್ಗೆ ಮಾತನಾಡುವ ಮಟ್ಟಕ್ಕೆ ಇಳಿಯಬೇಡಿ ಎಂದು ಅವರು ಹಲುಬಿದ್ದಾರೆ.ನಾವಂತೂ ನಿಮ್ಮ ಉಡುಪಿನ ಬಗ್ಗೆ ಅಲ್ಲ, ಕೆಲಸದ ಬಗ್ಗೆ ತಲೆ ಕೆಡಿಸಿಕೊಂಡಿದ್ದೇವೆ ಎಂಬ ಜನತೆಯ ಅಳಲು ಶಿವರಾಜರಿಗೆ ಕೇಳಿಸುತ್ತದೆಯೇ?
-------------------------------------------------------
ಬಾಟಲಿ ಸಂಸ್ಕೃತಿ
ಬಾಟಲಿ ನೀರು ಕುಡಿಯುವ ಸಂಸ್ಕೃತಿ ನಮ್ಮಲ್ಲಿ ಬೀಡುಬಿಟ್ಟಿದೆ. ಈಗ ವರ್ಷವೊಂದಕ್ಕೆ ಹತ್ತು ಕೋಟಿ ಲೀಟರ್ ನೀರು ಮಾರಾಟವಾಗುತ್ತಿದೆಯಂತೆ!
---------------------------------------------------------
![~.~](http://sampada.net/files/separator.gif)
2 comments:
i think so..
thanks
Post a Comment