Sunday, August 31, 2008

ಹರಿಣಿ

ಹರಿಣಿ

ತರಂಗ ವಾರಪತ್ರಿಕೆ ಆರಂಭವಾದಾಗ,ಅದರಲ್ಲಿ ಗಮನ ಸೆಳೆದಿದ್ದು ವ್ಯಂಗ್ಯಚಿತ್ರಗಳು.

tarangataranga

ಅದುವರೆಗೆ ಕನ್ನಡ ಪತ್ರಿಕೆಗಳು ನೀಡದಿದ್ದ ಪ್ರಾಶಸ್ತ್ಯವನ್ನು ತರಂಗದಲ್ಲಿ ವ್ಯಂಗ್ಯಚಿತ್ರಕ್ಕೆ ನೀಡಲಾಗಿತ್ತು.ವ್ಯಂಗ್ಯಚಿತ್ರದಲ್ಲಿ ಹರಿಣಿ ಎನ್ನುವ ಸಹಿ ಇತ್ತು. ಅದುವರೆಗೂ ಕನ್ನಡದಲ್ಲಿ ಹರಿಣಿ ಎನ್ನುವ ವ್ಯಂಗ್ಯಚಿತ್ರಕಾರ್ತಿಯ ಹೆಸರು ಯಾರೂನೋಡಿರಲಿಲ್ಲ. ಹಾಗೆ ನೋಡಿದರೆ ಕನ್ನಡದಲ್ಲಿ ವ್ಯಂಗ್ಯಚಿತ್ರಕಾರಿಣಿಯರೇ ಇದ್ದಿರಲಿಲ್ಲ. ಶಿವಮೊಗ್ಗದ ಗೀತಾಶಾಸ್ತ್ರಿ ಎನ್ನುವ ಹೆಸರು ವ್ಯಂಗ್ಯಚಿತ್ರದಲ್ಲಿ ಕಾಣುವುದಿತ್ತಲ್ಲದೆ ಹರಿಣಿ ಎಂಬ ಹೆಸರು ನೋಡಿದವರೇ ಇರಲಿಲ್ಲ. ತರಂಗದಲ್ಲಿ ಅತ್ಯುತ್ತಮ ಕ್ಯಾರಿಕೇಚರ್‌ಗಳನ್ನು ಹರಿಣಿ ಬಿಡಿಸುತ್ತಿದ್ದರು. ಹುಡುಗಿಯರ ಚಿತ್ರಗಳಂತೂ ತುಂಬಾ ಚೆನ್ನಾಗಿ ಬರುತ್ತಿದ್ದುವು.ವರ್ಷ ಕಳೆದ ಮೇಲಷ್ಟೇ ವ್ಯಂಗ್ಯಚಿತ್ರಗಳ ಕಲಾವಿದ ಹರಿಶ್ಚಂದ್ರ ಶೆಟ್ಟಿ ಎನ್ನುವುದನ್ನು ಪತ್ರಿಕೆ ಬಯಲು ಪಡಿಸಿತು.ಆದರೂ ಹರಿಣಿ ಎನ್ನುವ ಹೆಸರೇ ಮುಂದುವರಿಯಿತು.
harini

ಅವರ ನಂತರ ಪತ್ರಿಕೆ ಸೇರಿದ ವ್ಯಂಗ್ಯಚಿತ್ರ ಕಲಾವಿದ ಶ್ಯಾಮ್‌ಸುಂದರ್ ಕೂಡಾ ಅದೇ ಹಾದಿಯಲ್ಲಿ ಸಾಗಿ ತುಸುಕಾಲ ಶ್ಯಾಮಲಾ ಎನ್ನುವ ನಾಮಾಂಕಿತದಲ್ಲೇ ಚಿತ್ರ ಬರೆದರು.ಬರಹ ಆಗಲಿ, ಚಿತ್ರವಾಗಲಿ ಅದರ ಸಂದೇಶದಿಂದ ಅಳೆಯದೆ ಅದನ್ನು ಬರೆದವರಾರು ಎಂದು ಅಳೆಯುವ ಜನರ ಮನಸ್ಥಿತಿ ಇಂದಿಗೂ ಇದೆ.

-----------------------------------------------------------------------------------------------
ಪೆಟ್ರೋಲ್ ಬೆಲೆ ಏರಿಕೆ ಗಮನಕ್ಕೆ ಬಾರದಿರಲು ಏನು ಮಾಡಬೇಕು?
ಬಂಕಿಗೆ ಹೋಗಿ ಐನೂರು ರುಪಾಯಿ ಪೆಟ್ರೋಲ್ ಹಾಕಿಸಿಕೊಳ್ಳಿ. ಲೀಟರ್ ಪ್ರಸ್ತಾಪ ಬೇಡ!
------------------------------------------------------------------------------------------------

ಚಿಂಗ್ಲಿಷ್ v/s ಕಂಗ್ಲಿಷ್
ಚೀನಾ ಒಲಿಂಪಿಕ್ಸಿನಲ್ಲಿ ಪದಕದ ಶತಕ ಗಳಿಸಿ, ಅದ್ದೂರಿಯಾಗಿ ಕ್ರೀಡಾಕೂಟ ಆಯೋಜಿಸಿ ಸುದ್ದಿ ಮಾಡಿದೆ. ಇಡೀ ಜಗತ್ತಿನ ಗಮನವನ್ನೂ ಸೆಳೆದಿದೆ. ಆದರೆ ಎಷ್ಟು ಪ್ರಯತ್ನ ಮಾಡಿದರೂ,ಒಂದು ವಿಷಯದಲ್ಲಿ ಚೀನಾ ಸೋತಿದೆ. ಅದು ಇಂಗ್ಲಿಷ್ ವಿಚಾರದಲ್ಲಿ. ಬಂದ ಪ್ರವಾಸಿಗಳಿಗೆ ನೆರವಾಗಲು ಇಂಗ್ಲಿಷ್ ಬ್ಯಾನರ್‍ಗಳು ಇದ್ದರೂ ಅವುಗಳಲ್ಲಿ ಬಳಕೆಯಾಗಿದ್ದ ಚಿಂಗ್ಲಿಷ್ ಚೀನಾ ಇಂಗ್ಲಿಷಿನ ಚಿಚಾರದಲ್ಲಿ ಎಷ್ಟು ಹಿಂದಿದೆ ಎನ್ನುವುದನ್ನು ಬಯಲಾಗಿಸಿತಂತೆ.ಕೆಲವು ಸ್ಯಾಂಪಲ್‌ಗಳು:
- Go Into the Toilet Beard Know
- The service object of this toilet is limited by a person only.
- The toilet provides only into the toilet place, the dissatisfied foot goes into the toilet to have a bowel movement outside of other request.
- The one who go into toilet want to take good care of toilet facilities, strictlying forbid to move this toilet tool to did it touse.
--------------------------------------------------------------------------------
ಈಡಿಯಟ್ ಯಾರು?
ಸುಪ್ರೀಂ ಕೋರ್ಟಿನ ಪ್ರಕಾರ ಓರ್ವ ವ್ಯಕ್ತಿ ಈಡಿಯಟ್ ಎನಿಸಬೇಕಾದರೆ ಆತನಿಗೆ ಇಪ್ಪತ್ತರವರೆಗೆ ಎಣಿಕೆ ಬರಬಾರದು ಇಲ್ಲವೇ ತಂದೆ ತಾಯಿ ಹೆಸರು ಹೇಳಲು ಬರಬಾರದು ಇಲ್ಲ ವಾರದ ಹೆಸರುಗಳನ್ನು ಹೇಳಲು ಬರಬಾರದು!

Followers

ಓದಿದ್ದು ಕೇಳಿದ್ದು ನೋಡಿದ್ದು

ಇತ್ತೀಚೆಗೆ ಬಂದವರು

Blog Action Day

Search This Blog

Blog Archive

Snap Shots

Get Free Shots from Snap.com

Twitter Updates

    follow me on Twitter

    ಕೆಂಡಸಂಪಿಗೆಯಲ್ಲಿ ಓಕೆನೋ!!!

    ಓದಿದ್ದು ಕೇಳಿದ್ದು ನೋಡಿದ್ದು

    ಓದಿದ್ದು ಕೇಳಿದ್ದು ನೋಡಿದ್ದು ಎಲ್ಲವನ್ನು ತಮ್ಮ ಬ್ಲಾಗಿನಲ್ಲಿ ದಾಖಲಿಸುತ್ತಾ ಬಂದಿದ್ದಾರೆ ಅಶೋಕ್. ಕಂಡಿದ್ದನ್ನು ಕಂಡ ಹಾಗೇ ಹೇಳುತ್ತಾ , ಅಲ್ಲಿ ಇಲ್ಲಿ ಓದಿದ್ದನ್ನು ಉದಾಹರಣೆಯಾಗಿ ವಿವರಿಸುತ್ತಾ, ನೋಡಿದ್ದರ ಬಗ್ಗೆ ಮಾತನಾಡುವ ಇವರು ಅಲ್ಲಲ್ಲಿ ಒಂದಿಷ್ಟು ಕ್ಯಾತೆ ತೆಗೆದಿದ್ದಾರೆ. ಪ್ರತಿ ಬರಹಕ್ಕೂ ಒಂದೊಂದು ವ್ಯಂಗ್ಯಚಿತ್ರ ಹಾಕಿದ್ದಾರೆ. ಬಿಗ್ ಬ್ಯಾಂಗ್ ನ ವದಂತಿಯಿಂದ ಹಿಡಿದು ಯಡ್ಡಿ ಸರ್ಕಾರದ ಶತದಿನದ ಸಂಭ್ರಮದವರೆಗೆ ಕೊಂಕು ಹುಡುಕಿ, ಅದಕ್ಕೊಂದು ಕೊಂಡಿ ಕೊಟ್ಟಿದ್ದಾರೆ. ಇದನ್ನೆಲ್ಲ ನೋಡಬೇಕಿದ್ದವರು ಒಮ್ಮೆ ಹೋಗಿ ಬನ್ನಿ.