Sunday, September 14, 2008

ಇಟ್ಟಿಗೆಯಿಂದಲೇ ಬಾಂಬು ನಿಷ್ಕ್ರಿಯಗೊಳಿಸಬಹುದು!

ನಿನ್ನೆ ದೆಹಲಿಯಲ್ಲಿ ಕನಾಟ್ ಪ್ಲೇಸ್ ಬಳಿ ಬಾಂಬು ಕಸದ ತೊಟ್ಟಿಯಲ್ಲಿ ಸಿಕ್ಕಿತಂತೆ. ಸಮೀಪಲ್ಲಿದ್ದ ಪೋಲೀಸ್ ಕಾನ್‌ಸ್ಟೇಬಲ್ ಸುರೇಶ್ ಕುಮಾರ್ ಇಟ್ಟಿಗೆಯಿಂದ ಬಾಂಬಿನ ಗಡಿಯಾರವನ್ನು ಗುದ್ದಿ ಒಡೆದು ತನ್ಮೂಲಕ ಬಾಂಬು ನಿಷ್ಕ್ರಿಯಗೊಳಿಸಿದರಂತೆ.

bomb
-------------------------------------------------------------------

ಚಿನ್ನ v/s ಶೇರು
ಈ ವರ್ಷ ಚಿನ್ನದ ಬೆಲೆ ಗಗನಕ್ಕೇರಿರುವಂತೆ ಶೇರಿನ ಬೆಲೆಗಳು ಪಾತಾಳಕ್ಕಿಳಿದಿದೆ. ಚಿನ್ನವನ್ನು ಖರೀದಿಸಿಡುವುದು ಭಾರತೀಯರ ಮೆಚ್ಚಿನ ಉಳಿತಾಯ ಯೋಜನೆಯೂ ಹೌದು. ಚಿನ್ನದ ಮೇಲೆ ಹಣ ಹೂಡುವುದು ಉತ್ತಮ ತಂತ್ರವೇ? 1988ರಲ್ಲಿ ಚಿನ್ನದ ಮೇಲೆ ಹೂಡಿದ್ದ ನೂರು ರುಪಾಯಿ ಐನೂರು ರುಪಾಯಿ ಆಗಿದ್ದರೆ, ಶೇರಿನ ಮೇಲೆ ಹೂಡಿದ್ದ ಅದೇಮೊತ್ತ ಇದೀಗ ಎರಡೂವರೆ ಸಾವಿರವಾಗುತ್ತಿತ್ತಂತೆ!

-----------------------------------------------------

ಸೊಂಟದ ವಿಷ್ಯ!
ಎಪ್ಪತ್ತರ ದಶಕಕ್ಕೆ ಹೋಲಿಸಿದರೆ, ಭಾರತೀಯರ ಸರಾಸರಿ ಸೊಂಟದ ಸುತ್ತಳತೆ ಎರಡು ಸೆಂಟಿಮೀಟರ್ ಹೆಚ್ಚಿದೆಯಂತೆ.

ಹೆಚ್ಚಿದ ಸೊಂಟದ ಸುತ್ತಳತೆ ನಮ್ಮ ಹಣಕಾಸಿನ ಸುಸ್ಥಿತಿಗೆ ಹಿಡಿದ ಕೈಗನ್ನಡಿಯಿಬಹುದಾದರೂ, ಜಡ ಜೀವನ ಶೈಲಿಯ ಪ್ರತೀಕವೂ ಹೌದು. ಎಪ್ಪತ್ತರ ದಶಕಕ್ಕೆ ಬೇಡ, ಕಳೆದ ವರ್ಷಕ್ಕೆ ಹೋಲಿಸಿದರೆ ನಮ್ಮ ಸೊಟದ ಸುತ್ತಳತೆ ಹೆಚ್ಚಿಲ್ಲದಿದ್ದರೆ ಸರಿ!

------------------------------------------------------

ಮಮತಾ ಬ್ಯಾನರ್ಜಿ ಸಿಂಗೂರಿನಲ್ಲಿ ನ್ಯಾನೋ ಕಾರು ಯೋಜನೆಯ ಬಗ್ಗೆ ಪ್ರಶ್ನಾರ್ಥಕ ಚಿಹ್ನೆ ಹಾಕಲುಯಶಸ್ವಿಯಾಗಿದ್ದಾರೆ. ಒಂದು ವೇಳೆಭಾರತ-ಅಮೆರಿಕಾ ಅಣು ಒಪ್ಪಂದಕ್ಕೆ ಸಹಿ ಹಾಕಿ,ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ತನ್ನ ಯೋಜನೆಯಂತೆ ಪಶ್ಚಿಮ ಬಂಗಾಳದ ನಂದಿಗ್ರಾಮದಲ್ಲಿ ಅಣು ವಿದ್ಯುತ್ ಸ್ಥಾವರ ಸ್ಥಾಪನೆಗೆ ಕ್ರಮ ಕೈಗೊಂಡರೆ ಮಮತಾ ಸುಮ್ಮನಿದ್ದಾರೆಯೇ?

----------------------------------------------------------

ಮುಖ್ಯಮಂತ್ರಿ ಯೆಡಿಯೂರಪ್ಪ ಒಂದೆಡೆ ತಮ್ಮ ಆಪರೇಷನ್ ಕಮಲ ಯೋಜನೆಯನ್ನು ಮುಂದುವರಿಸಿ, ಕಾಂಗ್ರೆಸಿನ ಸೋಮಣ್ಣ ಮುಂತಾದುವರನ್ನು ಬಿಜೆಪಿಯೆಡೆ ಸೆಳೆಯಲು ಸಫಲರಾಗಿದ್ದಾರೆ.

ಇನ್ನೊಂದೆಡೆ ಹಾವೊಂದು ಅವರ ಮನೆಗೆ ಬಂತಂತೆ. ಹಾಗಾದರೆ ಹಾವೂ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದೇ? Smiling

-----------------------------------------------------------------

ಕೆಪಿಸಿಸಿ ಅಧ್ಯಕ್ಷರು ಯಾರು?

ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರು ಯಾರಾಗುತ್ತಾರೆಂದು ಬಹಳ ದಿನಗಳಿಂದ ವಿಶ್ಲೇಷಣೆಗಳು ನಡೆಯುತ್ತಿವೆ. ಅದರೆ ನೇಮಕವಾಗುವ ಲಕ್ಷಣವೇ ಇಲ್ಲ. ವಿ.ಕ.ದ ವರದಿಗಾರರು ದಿನಕ್ಕೊಂದು ವದಂತಿಯ ಮೇಲೆ ವರದಿ ಕಳುಹಿಸುತ್ತಿದ್ದಾರಂತೆ. ರೋಸಿ ಹೋದ ಸಂಪಾದಕ ವಿಶ್ವೇಶ್ವರ ಭಟ್, "ಹೋಗಲಿ ಬಿಡಿ, ನೇಮಕ ಆಗಿ ಬೇರೆಲ್ಲ ಪತ್ರಿಕೆಗಳಲ್ಲಿ ಸುದ್ದಿ ಬರಲಿ-ಮರುದಿನ ನಾವು ಸುದ್ದಿ ಪ್ರಕಟಿಸಿದರೆ ಸಾಕು- ಹೇಗೂ ಜನರಿಗೆ ಈ ವಿಷಯದಲ್ಲಿ ಆಸಕ್ತಿ ಉಳಿದಿಲ್ಲ. ಅದು ಬಿಡಿ ಆ ಹುದ್ದೆ ಮೇಲೆ ಕಣ್ಣಿಟ್ಟವರಿಗೂ ಅದರಲ್ಲೀಗ ಆಸಕ್ತಿಯಿಲ್ಲ" ಎಂದು ಹೇಳಿದ್ದಾರಂತೆ!

Followers

ಓದಿದ್ದು ಕೇಳಿದ್ದು ನೋಡಿದ್ದು

ಇತ್ತೀಚೆಗೆ ಬಂದವರು

Blog Action Day

Search This Blog

Blog Archive

Snap Shots

Get Free Shots from Snap.com

Twitter Updates

    follow me on Twitter

    ಕೆಂಡಸಂಪಿಗೆಯಲ್ಲಿ ಓಕೆನೋ!!!

    ಓದಿದ್ದು ಕೇಳಿದ್ದು ನೋಡಿದ್ದು

    ಓದಿದ್ದು ಕೇಳಿದ್ದು ನೋಡಿದ್ದು ಎಲ್ಲವನ್ನು ತಮ್ಮ ಬ್ಲಾಗಿನಲ್ಲಿ ದಾಖಲಿಸುತ್ತಾ ಬಂದಿದ್ದಾರೆ ಅಶೋಕ್. ಕಂಡಿದ್ದನ್ನು ಕಂಡ ಹಾಗೇ ಹೇಳುತ್ತಾ , ಅಲ್ಲಿ ಇಲ್ಲಿ ಓದಿದ್ದನ್ನು ಉದಾಹರಣೆಯಾಗಿ ವಿವರಿಸುತ್ತಾ, ನೋಡಿದ್ದರ ಬಗ್ಗೆ ಮಾತನಾಡುವ ಇವರು ಅಲ್ಲಲ್ಲಿ ಒಂದಿಷ್ಟು ಕ್ಯಾತೆ ತೆಗೆದಿದ್ದಾರೆ. ಪ್ರತಿ ಬರಹಕ್ಕೂ ಒಂದೊಂದು ವ್ಯಂಗ್ಯಚಿತ್ರ ಹಾಕಿದ್ದಾರೆ. ಬಿಗ್ ಬ್ಯಾಂಗ್ ನ ವದಂತಿಯಿಂದ ಹಿಡಿದು ಯಡ್ಡಿ ಸರ್ಕಾರದ ಶತದಿನದ ಸಂಭ್ರಮದವರೆಗೆ ಕೊಂಕು ಹುಡುಕಿ, ಅದಕ್ಕೊಂದು ಕೊಂಡಿ ಕೊಟ್ಟಿದ್ದಾರೆ. ಇದನ್ನೆಲ್ಲ ನೋಡಬೇಕಿದ್ದವರು ಒಮ್ಮೆ ಹೋಗಿ ಬನ್ನಿ.