ನೀವಿರುವ ಸ್ಥಾನ ಪತ್ತೆ ಮಾಡುವ ಫೈರ್‌ಪಾಕ್ಸ್
ಮೋಜಿಲ್ಲ ಫೈರ್‌ಫಾಕ್ಸ್ ತಂತ್ರಾಂಶ ಈಗ ನೀವಿರುವ ಸ್ಥಾನ ಪತ್ತೆ ಮಾಡಿ,ಅದಕ್ಕನುಗುಣವಾದ ವಿವರಗಳನ್ನು ನಿಮಗೆ ತೋರಿಸಲು ಶಕ್ತವಾಗಿದೆ. ಅದಕ್ಕೆ ನೀವು Geode ಎನ್ನುವ ಆಡ್‌ಓನ್‌ನ್ನು ಇಳಿಸಿಕೊಂಡು ನಿಮ್ಮ ಮೊಜಿಲ್ಲಾಕ್ಕೆ ಸೇರಿಸಿಕೊಳ್ಳಬೇಕು. ಈ ಸ್ಥಾನ ಪತ್ತೆಗೆ ಬ್ರೌಸರ್ ನೀವು ಬಯಸಿದ ವಿಧಾನವನ್ನು ಬಳಸುತ್ತದೆ. ಐಪಿ ವಿಳಾಸವನ್ನಾಧರಿಸಿ,ಜಿಪಿಎಸ್ ವಿಧಾನದಿಂದ, ವೈಫಿ ಸೇವೆ ಒದಗಿಸುವವರ ಅಧಾರದಿಂದ ಹೀಗೆ ತರಹೇವಾರಿ ವಿಧಾನದಿಂದ ಸ್ಥಳ ಪತ್ತೆ ಹಚ್ಚಲು ಬರುತ್ತದೆ. ಅದಿಲ್ಲದೆ ಬಳಕೆದಾರನೇ ಸ್ವತ: ತನ್ನ ಸ್ಥಳವನ್ನು ತಿಳಿಸುವ ಅಯ್ಕೆಯೂ ಇದೆ.ನಂತರ ಬ್ರೌಸರ್ ನಿಮ್ಮ ಸುತ್ತಮುತ್ತ ಇರುವ ಹೋಟೆಲುಗಳ ವಿವರಗಳನ್ನೂ ಮತ್ಯಾವುದೋ ಸೇವೆಯ ವಿವರಗಳನ್ನು ತಿಳಿಸಬಲ್ಲುದು. ನೀವು ಕಚೇರಿಯಲ್ಲಿದ್ದೀರ ಅಥವ ಮನೆಯಲ್ಲಿದ್ದೀರಾ ಎನ್ನುವುದರ ಮೇಲೆ ನಿಮಗೆ ಬೇಕಾದ ಸುದ್ದಿಯನ್ನು ಆಯ್ದು ನೀಡಲೂ ಇಂತಹ ಸೇವೆ ಸಮರ್ಥವಾಗಿದೆ.ಈ ತಂತ್ರಾಂಶ ಇಲ್ಲಿಂದ ಇಳಿಸಿಕೊಳ್ಳಿ.
------------------------------------------
ಇಂತಹ ರಾಜಕಾರಣಿಗಳಿಂದ ನಮಗೆ ನಿವೃತ್ತಿ ಇಲ್ಲವೇ?
----------------------------------------------------------
ಜಪಾನೀ ಮತ್ತು ಅಮೆರಿಕನ್ ವಿಜ್ಞಾನಿಗಳಿಗೆ ರಸಾಯನಶಾಸ್ತ್ರದಲ್ಲಿ ನೋಬೆಲ್ ಪ್ರಶಸ್ತಿ
ಜೆಲ್ಲಿಮೀನು ಹಸಿರಾಗಿ ಹೊಳೆಯುವ ಪ್ರೊಟೀನನ್ನು ಕಂಡಕೊಂಡ ಶಿಮೊಮುರಾ ಜಪಾನಿ ವಿಜ್ಞಾನಿ.ಚಾಲ್ಫಿ ಎಂಬ ಅಮೆರಿಕನ್ ವಿಜ್ಞಾನಿ, ಆ ಪ್ರೊಟೀನನ್ನು ಉತ್ಪಾದಿಸುವ ಜೀನನ್ನು ಪ್ರತ್ಯೇಕಿಸಿ,ಅದನ್ನು ಜೀವಕೋಶದಲ್ಲಿಟ್ಟು, ಯಾವುದೇ ಜೀವಿಯ ಜೀವಕೋಶಗಳಲ್ಲಿ ಈ ಬಣ್ಣದ ಪ್ರೊಟೀನಿಗೆ ಕಾರಣವಾಗುವ ಜೀನ್ ಹೊಂದಿದ ಜೀವಕೋಶವನ್ನು ಪ್ರತ್ಯೇಕಿಸಲು ಸಾಧ್ಯವೆಂದು ತೋರಿಸಿದರು. ಮತ್ತೊಬ್ಬ ವಿಜ್ಞಾನಿ ತ್ಸೀನ್ ಹಸಿರಿನ ಹೊರತಾಗಿ ಇತರ ಬಣ್ಣಗಳ ಪ್ರೊಟೀನನ್ನು ಉತ್ಪಾದಿಸಲು ಜೀನ್‍ನ್ನು ಬಳಸಿಕೊಂಡರು.ಜೀವಕೋಶಗಳ ಐಡಿಯಾಗಿ ಈ ಜೀನನ್ನು ಬಳಸಿಕೊಳ್ಳುವ ವಿಧಾನಕ್ಕೀಗ ನೋಬೆಲ್ ಬಂದಿದೆ.
---------------------------------------------------------
-------------------------------------------------------------
ಸಿಮಿ: ರಾಗ ಬದಲಿಸಿದ ಅಮರ್ ಸಿಂಗ್
ವಿಶ್ವದಲ್ಲೆಡೆ ಬಡ್ಡಿದರ ಇಳಿಕೆ:ಭಾರತದಲ್ಲಿ ಮಾತ್ರಾ ಇಲ್ಲ