ಮದುವೆ ಮುಹೂರ್ತ ಹೊತ್ತಿನಲ್ಲಿ ವಿದ್ಯುತ್ ಕಡಿತವಾದರೆ? ಮುಹೂರ್ತ ಮೀರುತ್ತದೆಂದು ಅವಸರದಲ್ಲಿ ತಾಳಿ ಕಟ್ಟುವುದೇ? ಅದೂ ಸಾಮೂಹಿಕ ವಿವಾಹದಲ್ಲಿ? ವಿದ್ಯುತ್ ಬಂದಾಗ ಪಕ್ಕದಲ್ಲಿ ನಿಂತ ವಧುವನ್ನು ನೋಡಿ ವರ ಮಹಾಶಯ ಮೂರ್ಛೆ ಹೋಗುವುದೊಂದು ಬಾಕಿ! ಮದುವೆ
-------------------------------------------------------------
------------------------------------------------------------
-----------------------------------------------------------
ಸಂಪದಿಗರಲ್ಲಿ ಕೆಲವರು ನಿಶಾಚರಿಗಳೂ ಇದ್ದಾರೆ. hpn ಅವರ ಕೆಲವು ಪ್ರತಿಕ್ರಿಯೆಗಳು ಹೊತ್ತಲ್ಲದ ಹೊತ್ತಿನಲ್ಲಿ ಇರುವುದು ನೋಡಿ, ಈ ಮನುಷ್ಯ ನಿದ್ರಿಸುವುದಿಲ್ಲವೇ ಎಂದು ತಲೆಕೆಡಿಸಿಕೊಂಡವರಿದ್ದಾರೆ.ನಮ್ಮ ರಾಜಕಾರಣಿಗಳು ಮುಂಜಾನೆ ಬೇಗನೇ ಎದ್ದು, ನಂತರ ಸಭೆ ಸಮಾರಂಭಗಳಲ್ಲಿ ತಮ್ಮ ನಿದ್ರೆಯನ್ನು ಮೇಕಪ್ ಮಾಡಿಕೊಳ್ಳಲು ಪ್ರಯತ್ನಿಸುವುದು, ನಂತರ ತಾವು "ದೇಶದ ಬಗ್ಗೆ ಚಿಂತಿಸುತ್ತಿದ್ದೆ" ಎಂದು ಸಮಜಾಯಿಷಿ ಕೊಡುವುದು ಇದ್ದದ್ದೇ.ಅಮೆರಿಕಾದಲ್ಲಿ ಚುನಾವಣಾ ಗುಂಗು. ಅಲ್ಲಿನ ರಿಪಬ್ಲಿಕನ್ ಪಕ್ಷದ ಉಪಾಧ್ಯಕ್ಷ ಪದವಿಯ ಆಕಾಂಕ್ಷಿ ಸರಾ ಪಾಲಿನ್ ಮುಂಜಾನೆ ಬೇಗ ಏಳುವ ಅಭ್ಯಾಸದವರಾದರೆ, ಅಧ್ಯಕ್ಷೀಯ ಪದದ ಅಭ್ಯರ್ಥಿ ಜಾನ್ ಮೆಕೈನ್ ಬೆಳಗ್ಗೆ ಸೂರ್ಯೋದಯವಾಗಿ ಎರಡುಮೂರು ಗಂಟೆ ಆಗಿರುತ್ತದೆ. ಹೀಗಾದರೆ, ಅವರು ಪರಸ್ಪರ ಸಂಧಿಸುವುದು ಹೇಗೆ ಎಂದು ಕೆಲವರು ಕುಚೋದ್ಯವಾಡುತ್ತಿದ್ದಾರೆ!
--------------------------------------------------------------------------
1 comment:
ತಮಾಷೆಯಾಗಿದೆ
Post a Comment