ಐಟಿ ಉದ್ದಿಮೆಯ ಹೊರಗುತ್ತಿಗೆ ಪದ್ಧತಿಯಲ್ಲಿ ವಿದೇಶಗಳ ಕೆಲಸಗಳನ್ನು ಭಾರತದಿಂದಲೇ ಮಾಡುವುದು ಸಾಮಾನ್ಯ. ಕಚೇರಿ ಕೆಲಸಗಳನ್ನು ಮನೆಯಿಂದಲೇ ಮಾಡಲೂ ಸಾಧ್ಯ. ಸುಭದ್ರ ಅಂತರ್ಜಾಲ ಸಂಪರ್ಕವಿದ್ದು,ಕಚೇರಿ ಭೇಟಿ ಅನಿವಾರ್ಯವಲ್ಲದ ಕೋಡಿಗರು ಈ ರೀತಿ ಕೆಲಸ ಮಾಡಲೂ ಸಾಧ್ಯ. ವಿಪ್ರೋದಲ್ಲಿ ಸದ್ಯ ಇಂತಹ ನೌಕರರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ. ಆದರೀಗ ಇದನ್ನು ಹೆಚ್ಚು ಅಳವಡಿಸುವ ಯೋಜನೆ ಕಂಪೆನಿಗಿದೆ. ಕಚೇರಿ ಸ್ಥಳದ ಉಳಿತಾಯ, ಕಡಿಮೆ ಪ್ರಯಾಣ, ಆರೋಗ್ಯ ಸಮಸ್ಯೆಯಿರುವವರಿಗೂ ಅನುಕೂಲ ಮುಂತಾದ ಧನ ಅಂಶಗಳಿರುವ ಕಚೇರಿ ಕೆಲಸ ಮನೆಯಿಂದ ಮಾದರಿ, ಕೆಲ ಐಟಿ ಗಿರಾಕಿಗಳಿಗೆ ಸಮ್ಮತವಲ್ಲವೆನ್ನುವುದು ಸದ್ಯದ ಸಮಸ್ಯೆ. ಆದರೂ ನಿಧಾನವಾಗಿ ಮೂರನೇ ಒಂದಂಶ ನೌಕರರನ್ನು ಮನೆಯಿಂದಲೇ ಕೆಲಸ ಮಾಡಿಸುವುದು ವಿಪ್ರೋ ಯೋಚನೆ.
----------------------------------------------------------------------------------------------
ಮುಂದಿನ ರಿಸರ್ವ್ ಬ್ಯಾಂಕ್ ಮುಖ್ಯಸ್ಥರಾಗಿ ಡಿ.ಸುಬ್ಬರಾವ್ ನೇಮಕವಾಗಿದೆ. ಹಣದುಬ್ಬರ ಪ್ರಮಾಣ ಶೇ.ಹದಿಮೂರು ತಲುಪುವ ಹಂತದಲ್ಲಿ ರಿಸರ್ವ್ ಬ್ಯಾಂಕ್ ಬಡ್ಡಿದರ,ಹಣ ಪ್ರಸರಣದ ಬಗೆ ತಳೆಯುವ ನಿಲುವುಗಳು ಮಹತ್ತ್ವದಾಗಲಿವೆ. ಸುಬ್ಬರಾವ್ ಈ ಸವಾಲುಗಳನ್ನು ಹೇಗೆ ಎದುರಿಸಲಿದ್ದಾರೆ-ಕಾದು ನೋಡೋಣ.
------------------------------------------------------------------------
ಲಾಲೂ ಪ್ರಸಾದ ಯಾದವ್ ಜನರನ್ನು ನಗಿಸುವತ್ತಲೇ ಹೆಚ್ಚು ಗಮನಕೊಡುವುದು ಎಲ್ಲರಿಗೂ ಗೊತ್ತು. ಆದರೆ ಪ್ರವಾಹ ಪೀಡಿತ ಜನರ ನಡುವೆಯೂ ಅದೇ ರೀತಿ ನಡಕೊಳ್ಳುತ್ತಿದ್ದಾರಂತೆ.
ಅಲ್ಲೂ ವೋಟು ಕೇಳುವ ವೈಖರಿ,ನೋಟು ಕೊಡುವ ಚಾಳಿ ಬಿಟ್ಟಿಲ್ಲವಂತೆ!
----------------------------------------------------------------------
ಹಿಂದು-ಕೇಶವ್
No comments:
Post a Comment