Thursday, July 16, 2009

ಕಸವನ್ನೇ ತಿಂದರು ಕೊನೆಗೆ ಹಾಲನ್ನೇ ನೀಡುವೆ ನಮಗೆ



 
 ಶ್ರೀವತ್ಸ ಜೋಷಿಯವರ ಬರಹಕ್ಕೆ ಪ್ರತಿಕ್ರಿಯೆ-ಅವರ ಅನುಮತಿ ಇಲ್ಲದೆ ಇಲ್ಲಿ ಕೊಡುತ್ತಿದ್ದೇನೆ:
ನಿಮ್ಮ "ಅಂದದಾಕಳ ಕಂದ ಕರುಗಳ ಮಂದೆ ಮಂದೆಯಲಿ"ಲೇಖನ ನನ್ನ ಬಾಲ್ಯದ ದಿನಗಳನ್ನು ನೆನಪಿಸಿತು.
 
ದನ ಕಾಯುವ ಶೂದ್ರ ಹುಡುಗರ ಜೊತೆ ಆಡಿದ್ದಕ್ಕಾಗಿ ಅಜ್ಜಿ
ಹೊಡೆದದ್ದು, ನಮ್ಮ ಶೈನಿ ಕರುವನ್ನು ಶೆಟ್ಟಿ ಮನೆ ನಾಯಿ ಕಚ್ಚಿ ಅದರ ಕಾಲು ಶಾಶ್ವತವಾಗಿ ಕುಂಟಾಗಿ
ಏನೇ ಔಷಧಕ್ಕೂ ಗುಣವಾಗದೇ ಇದ್ದದ್ದು, ಅದು ಸಾಯುವವರೆಗೂ ಅಪ್ಪಯ್ಯ ತನ್ನ ಮಗುವಿನಂತೆ ಜೋಪಾನ
ಮಾಡಿದ್ದು, ಅದು ಗಬ್ಬ ಧರಿಸಿ ೩ ಕರು ಹಾಕಿತ್ತು ಅದರ ಗಬ್ಬದಲ್ಲಿ ಅದು ನಡೆಯಲು ಮಲಗಿದ್ದಲ್ಲಿಂದ
ಏಳಲು ಪಡುತ್ತಿದ್ದ ಪಾಡು ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ಮುದ್ದಾದ ಶೈನಿ ಎಂಬ ಹೆಸರು ಹೋಗಿ ಮೋಟಿ
ಎಂದು ಕರೆಯಿಸಿಕೊಳ್ಳುತ್ತಿದ್ದ ಅವಳು ಅಪ್ಪನ ಸ್ವರ ಕೇಳಿದಾಗ ಕಿವಿ ನಿಮಿರಿಸಿ ಅಂಬೆ
ಅನ್ನುತ್ತಿದ್ದ ದಿನಗಳು, ಕೊನೆಗೆ ನಮ್ಮ ಹಟ್ಟಿಯಲ್ಲೆ ಸತ್ತು  ಅಪ್ಪಯ್ಯ ಅದನ್ನು ಹೂತ ತೆಂಕು
ಮಕ್ಕಿ ಎಲ್ಲ ನೆನಪಾಗಿ ಕಣ್ಣೀರು ತರಿಸಿತು.
 
ಆದರೆ ಇಂದಿಗೂ ಹೆಮ್ಮೆ ಎಂದರೆ ಅಪ್ಪಯ್ಯ - ಅಮ್ಮ ಇಬ್ಬರೇ ಯಾವ
ಆಳು- ಕಾಳುಗಳ ಸಹಾಯವಿಲ್ಲದೆ ೩ ದನ -೪ ಹೆಂಗರುಗಳನ್ನು ಮಂಗಳೆ, ಲಕ್ಷ್ಮಿ ಅಂತ ಕರೆಯುತ್ತಾ,
ನೀವೆಲ್ಲ ಇವತ್ತು ಬಂದು ಅಮ್ಮ - ಅಪ್ಪಯ್ಯ ಅಂದು ಹೋಗ್ತೀರಿ ಆದರೆ ನಾಳೆ ನಾವು ನಮ್ಮ ಈ ಮಕ್ಕಳು
ಅನ್ನುತ್ತಾ ಇರುವಾಗ ಮೂಲೆಯಲ್ಲೆಲ್ಲೋ ಒಂದು ಅಸೂಯೆಯ ಪರೆ. "ನನ್ನ ಮಗಳು ಹೆತ್ತಳು, ಹೆಣ್ಣು ಅಂತ
ಅಮ್ಮ ಹೇಳಿದ್ದು ಕೇಳಿ ನನ್ನ ತಮ್ಮ ನಾನು ಆಶಾ ಹೆತ್ತಳೆಂದೆ ತಿಳಿದಿದ್ದೆ. ಕೊನೆಗೆ ನೋಡಿದರೆ
ಮಂಗಳೆ ಹೆತ್ತಿದ್ದಂಬ್ರು. ಅಂದಿದ್ದ. ಗ್ರಾಮೀಣ ಭಾಗದಲ್ಲಿ ಇನ್ನೂ ಹಸು ಕರುಗಳೊಂದಿಗೆ ಆ
ಭಾವನಾತ್ಮಕ ಸಂಬಂಧವಿದೆ.
 
"ಕಸವನ್ನೆ ತಿಂದರು
ಕೊನೆಗೆ ಹಾಲನ್ನೆ ನೀಡುವೆ ನಮಗೆ" ನಿಜವಾಗಲು ಅರ್ಥಗರ್ಭಿತ ಅಲ್ಲವೆ ?
 
ಆ. ಅ. ಬೆಂಗಳೂರು
------------------------------------------------------------------
----------------------------------------------------------------
toi
(TOI)
-------------------------------------------------
aa
(Asian Age)
-----------------------------------------------------------
dna
(DNA)
----------------------------
-------------------------------------
kp
--------------------------------------------------

No comments:

Followers

ಓದಿದ್ದು ಕೇಳಿದ್ದು ನೋಡಿದ್ದು

ಇತ್ತೀಚೆಗೆ ಬಂದವರು

Blog Action Day

Search This Blog

Blog Archive

Snap Shots

Get Free Shots from Snap.com

Twitter Updates

    follow me on Twitter

    ಕೆಂಡಸಂಪಿಗೆಯಲ್ಲಿ ಓಕೆನೋ!!!

    ಓದಿದ್ದು ಕೇಳಿದ್ದು ನೋಡಿದ್ದು

    ಓದಿದ್ದು ಕೇಳಿದ್ದು ನೋಡಿದ್ದು ಎಲ್ಲವನ್ನು ತಮ್ಮ ಬ್ಲಾಗಿನಲ್ಲಿ ದಾಖಲಿಸುತ್ತಾ ಬಂದಿದ್ದಾರೆ ಅಶೋಕ್. ಕಂಡಿದ್ದನ್ನು ಕಂಡ ಹಾಗೇ ಹೇಳುತ್ತಾ , ಅಲ್ಲಿ ಇಲ್ಲಿ ಓದಿದ್ದನ್ನು ಉದಾಹರಣೆಯಾಗಿ ವಿವರಿಸುತ್ತಾ, ನೋಡಿದ್ದರ ಬಗ್ಗೆ ಮಾತನಾಡುವ ಇವರು ಅಲ್ಲಲ್ಲಿ ಒಂದಿಷ್ಟು ಕ್ಯಾತೆ ತೆಗೆದಿದ್ದಾರೆ. ಪ್ರತಿ ಬರಹಕ್ಕೂ ಒಂದೊಂದು ವ್ಯಂಗ್ಯಚಿತ್ರ ಹಾಕಿದ್ದಾರೆ. ಬಿಗ್ ಬ್ಯಾಂಗ್ ನ ವದಂತಿಯಿಂದ ಹಿಡಿದು ಯಡ್ಡಿ ಸರ್ಕಾರದ ಶತದಿನದ ಸಂಭ್ರಮದವರೆಗೆ ಕೊಂಕು ಹುಡುಕಿ, ಅದಕ್ಕೊಂದು ಕೊಂಡಿ ಕೊಟ್ಟಿದ್ದಾರೆ. ಇದನ್ನೆಲ್ಲ ನೋಡಬೇಕಿದ್ದವರು ಒಮ್ಮೆ ಹೋಗಿ ಬನ್ನಿ.