Thursday, September 18, 2008

ಕುಡುಕರಲ್ಲಿ ನವರಸ

ಗಡಂಗೇ ಮನೆ ಎಂದು ಬಗೆವವರು, ಬೋರಾಗುತ್ತದೆ ಎಂದು ಕುಡಿಯುವವರು, ಗಂಡಸುತನ ಪ್ರದರ್ಶಿಸಲು ಕುಡಿಯುವವರು,ಸಮುದಾಯ ಕುಡುಕರು,ಖಿನ್ನತೆಯಿಂದ ಕುಡಿಯುವವರು...ಹೀಗೆ ಒಂಭತು ಬಗೆಯ ಕುಡುಕರನ್ನು ಪಟ್ಟಿ ಮಾಡಿದ್ದಾರೆ.ಇಂಗ್ಲೆಂಡಿನ ಆರೋಗ್ಯ ಇಲಾಖೆಯ ಸಂಶೋಧಕರ ಸಂಶೋಧನೆಯ ಫಲವಿದು!

---------------------------------------------------------------

dnaಬ್ಯಾಂಕ್(ರಪ್ಟ್)

ಏಐಜಿ ಇನ್ಸೂರೆನ್ಸ್ ಕಂಪೆನಿ ದಿವಾಳಿ ಏಳುವುದನ್ನು ತಪ್ಪಿಸಲು ಅಲ್ಲಿನ ಫೆಡೆರಲ್ ರಿಸರ್ವ್ ವ್ಯವಸ್ಥೆ ಮಾಡಿದೆ. ಹಣಕಾಸು ನಿರ್ವಹಣೆಯಲ್ಲಿ ಅಶಿಸ್ತು, ಬೇಕಾಬಿಟ್ಟಿ ನಿರ್ಧಾರಗಳಿಂದ ಕಂಪೆನಿ ಮುಳುಗುವ ಹಂತ ತಲುಪಿದ್ದರೂ, ಲೆಹಮಾನ್ ಬ್ರದರ್ಸ್ ಬ್ಯಾಂಕಿನಂತೆ ಈ ವಿಮಾ ಕಂಪೆನಿಯನ್ನೂ ಮುಳುಗಲು ಬಿಡುವುದು ಅಲ್ಲೋಲ ಕಲ್ಲೋಲ ಎಬ್ಬಿಸಬಹುದೆಂಬ ಕಾರಣಕ್ಕೆ ಸರಕಾರ ಹಸ್ತಕ್ಷೇಪ ಮಾಡಿರುವುದು ಸ್ಪಷ್ಟ.

domino

-------------------------------------------------------------------

ಐಫೋನ್‌ಗೆ ಸ್ಪರ್ಧೆ ಒಡ್ಡಲು ಗೂಗಲ್‌ನ ಡ್ರೀಮ್

ಗೂಗಲ್ ಕಂಪೆನಿಯ ಆಂಡ್ರಿಯೋಡ್ ತಂತ್ರಾಂಶ ಅನುಸ್ಥಾಪಿಸಿದ ಮೊಬೈಲ್ ಫೋನ್ ಡ್ರೀಮ್ ಮುಂದಿನ ವಾರ ಬಿಡುಗಡೆಯಾಗಬಹುದು.ಐಫೋನ್‌ಗೆ ಸ್ಪರ್ಧೆ ನೀಡುವ ಉದ್ದೇಶದಿಂದ ಇದನ್ನು ತರಲಾಗಿದೆ. ಟಿಮೊಬೈಲ್, ತೈವಾನ್‌ನ ಇಲೆಕ್ಟ್ರಾನಿಕ್ಸ್ ಕಂಪೆನಿ ಎಚ್ ಟಿ ಸಿ ಸಹಭಾಗಿತ್ವದ ಈ ಸಾಧನದಲ್ಲಿ ಕ್ಯಾಮರಾ,ಸ್ಪರ್ಷ ಸಂವೇದಿ ತೆರೆ, ತಿರುಗಿಸಲಾಗುವ ಕೀಲಿ ಮಣೆ,ಮ್ಯೂಸಿಕ್ ಪ್ಲೇಯರ್ ಇರುತ್ತದೆ. ಬೆಲೆ ನೂರೈವತ್ತು ಡಾಲರುಗಳೆಂದು ಊಹೆ.

--------------------------------------------------------------

nytimes


Followers

ಓದಿದ್ದು ಕೇಳಿದ್ದು ನೋಡಿದ್ದು

ಇತ್ತೀಚೆಗೆ ಬಂದವರು

Blog Action Day

Search This Blog

Blog Archive

Snap Shots

Get Free Shots from Snap.com

Twitter Updates

    follow me on Twitter

    ಕೆಂಡಸಂಪಿಗೆಯಲ್ಲಿ ಓಕೆನೋ!!!

    ಓದಿದ್ದು ಕೇಳಿದ್ದು ನೋಡಿದ್ದು

    ಓದಿದ್ದು ಕೇಳಿದ್ದು ನೋಡಿದ್ದು ಎಲ್ಲವನ್ನು ತಮ್ಮ ಬ್ಲಾಗಿನಲ್ಲಿ ದಾಖಲಿಸುತ್ತಾ ಬಂದಿದ್ದಾರೆ ಅಶೋಕ್. ಕಂಡಿದ್ದನ್ನು ಕಂಡ ಹಾಗೇ ಹೇಳುತ್ತಾ , ಅಲ್ಲಿ ಇಲ್ಲಿ ಓದಿದ್ದನ್ನು ಉದಾಹರಣೆಯಾಗಿ ವಿವರಿಸುತ್ತಾ, ನೋಡಿದ್ದರ ಬಗ್ಗೆ ಮಾತನಾಡುವ ಇವರು ಅಲ್ಲಲ್ಲಿ ಒಂದಿಷ್ಟು ಕ್ಯಾತೆ ತೆಗೆದಿದ್ದಾರೆ. ಪ್ರತಿ ಬರಹಕ್ಕೂ ಒಂದೊಂದು ವ್ಯಂಗ್ಯಚಿತ್ರ ಹಾಕಿದ್ದಾರೆ. ಬಿಗ್ ಬ್ಯಾಂಗ್ ನ ವದಂತಿಯಿಂದ ಹಿಡಿದು ಯಡ್ಡಿ ಸರ್ಕಾರದ ಶತದಿನದ ಸಂಭ್ರಮದವರೆಗೆ ಕೊಂಕು ಹುಡುಕಿ, ಅದಕ್ಕೊಂದು ಕೊಂಡಿ ಕೊಟ್ಟಿದ್ದಾರೆ. ಇದನ್ನೆಲ್ಲ ನೋಡಬೇಕಿದ್ದವರು ಒಮ್ಮೆ ಹೋಗಿ ಬನ್ನಿ.