Friday, August 29, 2008

ಸೆನ್ಸಾರ್ ಮಂಡಳಿ "ಮಾದೇಶ" ಚಲನಚಿತ್ರ ನೋಡಿ ಕಂಗಾಲಾಯಿತಂತೆ. ಮಗು ಕೊಲೆ ಮಾಡಿ, ಪೊಲೀಸ್ ಠಾಣೆಗೆ ಹೋಗಿ, ರಕ್ತದಿಂದಲೇ ಸಹಿ ಮಾಡುವ ದೃಶ್ಯವೂ ಸೇರಿದಂತೆ ಮೂವತ್ತಕ್ಕೂ ಹೆಚ್ಚು ಕೊಲೆ ಚಿತ್ರದಲ್ಲಿತ್ತಂತೆ. "ಆಕ್ಷೇಪಾರ್ಹ ದೃಶ್ಯಗಳಿದ್ದರೆ ಕತ್ತರಿ ಪ್ರಯೋಗ ಮಾಡಬಹುದಲ್ಲ, ಸೆನ್ಸಾರ್ ಸರ್ಟಿಫಿಕೇಟ್ ನಿರಾಕರಿಸಿದರೆ ಹೇಗೆ?" ಎಂದು ಅದರ ನಿರ್ಮಾಪಕರು ಕೇಳಿದಾಗ ಮಂಡಳಿಯವರು "ಹಾಗೆ ಮಾಡಿದರೆ ಉಳಿಯುವುದು ನಾಲ್ಕು ಹಾಡು, ಇಪ್ಪತ್ತು ನಿಮಿಷದ ದೃಶ್ಯಗಳು" ಎಂದುತ್ತರಿಸಿದರಂತೆ.

ಪ್ರಾಯಶ: ಇವತ್ತು ಚಿತ್ರ ಬಿಡುಗಡೆಯಾಗುತ್ತದೆ. ಯಾವ ಮಾಯಕ ನಡೆಯಿತೋ?ಒಂದು ಗುಮಾನಿ ಹೀಗಿದೆ:

ಸರ್ಟಿಫಿಕೇಟ್ ಕೊಟ್ಟರೆ ಸರಿ,ಇಲ್ಲವಾದರೆ ಹೆಣಗಳು ತೆರೆಯ ಮೇಲೆ ಯಾಕೆ, ಇಲ್ಲೇ ಬೀಳಲಿವೆ ಎಂಬ ಒಂದು ಮಾತು ಕೆಲಸ ಮಾಡಿರಬಹುದು! Smiling

------------------------------------------------------------------------------------------------

ಮುಂಬೈಯಿಂದ ಬಂದ ನಾಯಿ,ಊರಿನ ನಾಯಿಗಳಿಂದ ಭಿನ್ನ ಹೇಗೆ?

ಮುಂಬೈ ನಾಯಿ ಬಾಲವನ್ನು ಮೇಲೆ ಕೆಳಗೆ ಆಡಿಸುತ್ತವೆ.

ಅಲ್ಲಿ ಬಾಲವನ್ನು ಅಡ್ಡಡ್ಡ ಆಡಿಸಲು ಸ್ಥಳ ಎಲ್ಲಿದೆ,ಪಾಪ!

----------------------------------------------------------------------------------

ದಲಾಲ್ ಸ್ಟ್ರೀಟ್ ಎಲ್ಲವನ್ನೂ ಕಲಿಸುತ್ತದೆ-ಆದರೆ ಬೋಧನಾಶುಲ್ಕ ತುಸು ದುಬಾರಿ ಅಷ್ಟೆ.

----------------------------------------------------------------------------------

harini

harini

ಚೀನಾಗೆ ನೂರು, ಭಾರತಕ್ಕೇಕೆ ಮೂರು?
ಒಲಿಂಪಿಕ್ಸಿನಲ್ಲಿ ಭಾರತದ ಸಾಧನೆ ಬಗ್ಗೆ ವಿಜಯ ಕರ್ನಾಟಕದಲ್ಲಿ ಬರಹವಿದೆ.
"ಒಲಿಂಪಿಕ್ಸ್ ಪದಕ ಗೆಲ್ಲುವುದೆಂದರೆ ಅದು ಯಡಿಯೂರಪ್ಪ ಮಂತ್ರಿಮಂಡಲದಲ್ಲಿ ಸ್ಥಾನಗಿಟ್ಟಿಸಿದಂತಲ್ಲ! "
-------------------------------------------------------------------------------------------
ಅಶಿಸ್ತಿನಿಂದ ಬದುಕಿರಿ, ಆರೋಗ್ಯವಾಗಿರಿ
ನೆಲ್ಲಿಕೆರೆ ವಿಜಯಕುಮಾರ್
ಪ್ರ: ಸುಮ್ನೆ ಸುಮ್ನೆ ಪ್ರಕಾಶನ
ನೊಣವಿನಕೆರೆ, ತಿಪಟೂರು ತಾಲೂಕು
ತುಮಕೂರು ಜಿಲ್ಲೆ
ಪುಟ: 172 ಬೆಲೆ: ರೂ.100
ಈ ಪುಸ್ತಕ ಓದಬೇಕೆನಿಸಿದೆ.
ಅಶಿಸ್ತಿನಿಂದ ಮನಸ್ಸನ್ನು ನಿರಾಳವಾಗಿರಿಸಿಕೊಂಡು ಸೃಜನಶೀಲರಾಗುವ ತಾತ್ವಿಕ ಜಿಜ್ಞಾಸೆಗೆ ಈ ಪುಸ್ತಕ ಓದುಗನನ್ನು ಈಡು ಮಾಡುತ್ತದಂತೆ.
--------------------------------------------------------------------------------------------
ವಿದ್ಯುತ್ ಕಡಿತದಿಂದ ಮಕ್ಕಳ ಓದಿಗೆ ತೊಂದರೆಯಾಗುತ್ತೆ.. ಅದಕ್ಕಿಂತ ಟಿವಿ ಧಾರಾವಾಹಿ ತಪ್ಪುತ್ತೆ...
--------------------------------------------------------------------------------------------
ಗಣೇಶನ ಆವಾಂತರ
"ಉದಯವಾಣಿ"ಯ ಈ ಬರಹದಲ್ಲಿ ಗಣೇಶನ ವಿಗ್ರಹದಲ್ಲಿನ ಬಣ್ಣದ ರಾಸಾಯಿನಿಕಗಳು ಪರಿಸರದ ಮೇಲೆ ಮಾಡುವ ಹಾನಿಯನ್ನು ವಿವರಿಸಲಾಗಿದೆ.
http://www.udayavani.com/showstory.asp?news=1&contentid=568110&lang=2

Followers

ಓದಿದ್ದು ಕೇಳಿದ್ದು ನೋಡಿದ್ದು

ಇತ್ತೀಚೆಗೆ ಬಂದವರು

Blog Action Day

Search This Blog

Blog Archive

Snap Shots

Get Free Shots from Snap.com

Twitter Updates

    follow me on Twitter

    ಕೆಂಡಸಂಪಿಗೆಯಲ್ಲಿ ಓಕೆನೋ!!!

    ಓದಿದ್ದು ಕೇಳಿದ್ದು ನೋಡಿದ್ದು

    ಓದಿದ್ದು ಕೇಳಿದ್ದು ನೋಡಿದ್ದು ಎಲ್ಲವನ್ನು ತಮ್ಮ ಬ್ಲಾಗಿನಲ್ಲಿ ದಾಖಲಿಸುತ್ತಾ ಬಂದಿದ್ದಾರೆ ಅಶೋಕ್. ಕಂಡಿದ್ದನ್ನು ಕಂಡ ಹಾಗೇ ಹೇಳುತ್ತಾ , ಅಲ್ಲಿ ಇಲ್ಲಿ ಓದಿದ್ದನ್ನು ಉದಾಹರಣೆಯಾಗಿ ವಿವರಿಸುತ್ತಾ, ನೋಡಿದ್ದರ ಬಗ್ಗೆ ಮಾತನಾಡುವ ಇವರು ಅಲ್ಲಲ್ಲಿ ಒಂದಿಷ್ಟು ಕ್ಯಾತೆ ತೆಗೆದಿದ್ದಾರೆ. ಪ್ರತಿ ಬರಹಕ್ಕೂ ಒಂದೊಂದು ವ್ಯಂಗ್ಯಚಿತ್ರ ಹಾಕಿದ್ದಾರೆ. ಬಿಗ್ ಬ್ಯಾಂಗ್ ನ ವದಂತಿಯಿಂದ ಹಿಡಿದು ಯಡ್ಡಿ ಸರ್ಕಾರದ ಶತದಿನದ ಸಂಭ್ರಮದವರೆಗೆ ಕೊಂಕು ಹುಡುಕಿ, ಅದಕ್ಕೊಂದು ಕೊಂಡಿ ಕೊಟ್ಟಿದ್ದಾರೆ. ಇದನ್ನೆಲ್ಲ ನೋಡಬೇಕಿದ್ದವರು ಒಮ್ಮೆ ಹೋಗಿ ಬನ್ನಿ.