Tuesday, September 9, 2008

ಐಟಿ ಕಂಪೆನಿಗಳ ಡೋಲಾಯಮಾನ ಸ್ಥಿತಿ

ಪಶ್ಚಿಮ ಬಂಗಾಳ ಸರಕಾರವು ಸಿಂಗೂರಿನಲ್ಲಿ ಟಾಟಾದ ಕಾರು ಯೋಜನೆಗೆ ಉಂಟಾದ ಅಡ್ಡಿಯನ್ನು ನಿವಾರಿಸುವಲ್ಲಿ ತೋರಿದ ವೈಫಲ್ಯವು ಹಲವಾರು ಕಂಪೆನಿಗಳಿಗೆ ಭಯ ಹುಟ್ಟಿಸಿದೆ.

ಇನ್ಫೋಸಿಸ್ ಕಂಪೆನಿ ಇನ್ನೂರೈವತ್ತು ಕೋಟಿ ವೆಚ್ಚದಲ್ಲಿ ತಂತ್ರಾಂಶ ಅಭಿವೃದ್ಧಿ ಕೇಂದ್ರವನ್ನು ಕೊಲ್ಕತ್ತದ ಹೊರವಲಯದಲ್ಲಿ ಸ್ಥಾಪಿಸಲು ಮುಂದೆ ಬಂದಿತ್ತು. ಸಿಂಗೂರಿನ ಪ್ರಕರನ,ಅಲ್ಲಿ ಕೋರ್ಟು ಆದೇಶವನ್ನು ಅನುಷ್ಠಾನ ಮಾಡಲೂ ಸರಕಾರದ ವೈಫಲ್ಯದ ನಂತರ ಈಗ ಇನ್ಫೋಸಿಸ್ ತನ್ನ ನಿರ್ಧಾರವನ್ನು ಮರುಪರಿಶೀಲಿಸುತ್ತಿದೆಯಂತೆ.

ಅತ್ತ ವಿಪ್ರೋ ಮೂರುನಾಲ್ಕು ಸಾವಿರ ನೌಕರರ ಕೆಲಸ ಅತೃಪ್ತಿಕರ-ಅದನ್ನು ಸುಧಾರಿಸಿ,ಇಲ್ಲ ನೌಕರಿ ಕಳೆದುಕೊಳ್ಳಲು ಸಿದ್ಧರಾಗಿ ಎಂದು ನೋಟೀಸು ಕೊಟ್ಟಿದೆಯಂತೆ.

ಈ ಹಿನ್ನೆಲೆಯಲ್ಲಿ ನೋಡಿದರೆ, ಇನ್ಫೋಸಿಸ್ ತೀರ್ಮಾನಕ್ಕೆ ಕಾರಣ ಸಿಂಗೂರು ಹಗರಣವೇ ಅಲ್ಲ ಐಟಿ ವಲಯದ ಡೋಲಾಯಮಾನ ಸ್ಥಿತಿಯೇ ಎಂಬ ಶಂಕೆ ಹುಟ್ಟಿದರೆ ಅದು ಸಹಜ!

---------------------------------------------------------------------

federer

ರೋಜರ್ ಫೆಡರರ್ ಯುಎಸ್ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ಐದನೆ ಬಾರಿ ಗೆದ್ದಿದ್ದಾರೆ.

-------------------------------------------------------------------

ಬಿಜೆಪಿ ಸರಕಾರದ ನೂರು ದಿನಗಳ ಸಂಭ್ರಮಾಚರಣೆಯಲ್ಲಿ ಇರುವವರೆಲ್ಲ,ಪಕ್ಷಕ್ಕೆ ಮೂರು ದಿನಗಳ ಹಿಂದೆ ಬಂದಿರೋರು!

(ಪದ್ಮನಾಭರ ವ್ಯಂಗ್ಯಚಿತ್ರದ ಅಡಿಬರಹ)

----------------------------------------------------------------

123

-------------------------------------------------------------------

ಅಮೆರಿಕಾದ ಕಾಂಗ್ರೆಸ್ ಭಾರತ ಮತ್ತು ಅಮೆರಿಕಾ "ಅಣು" ಸಹಕಾರಕ್ಕೆ ಅನುಮತಿ ನೀಡಿದರೆ,ಭಾರತ ಅಣು ಇಂಧನ ಮತ್ತು ರಿಯಾಕ್ಟರ್ ಸಾಧನಗಳ ಆಮದು ಮಾಡಿಕೊಳ್ಳಲು ಹಾದಿ ಸುಗಮವಾಗುತ್ತದೆ. ಭಾರತ ಕೋಟಿಗಟ್ಟಲೆ ವ್ಯಯಿಸಿ, ರಿಯಾಕ್ಟರುಗಳ ಸ್ಥಾಪನೆ ಮಾಡಿದ ನಂತರ, ಅಮೆರಿಕಾ ಏನಾದರೂ ತಗಾದೆ ತೆಗೆದು ಒಪ್ಪಂದದಿಂದ ಹಿಂದೆ ಸರಿಯದ ಹಾಗೆ ಮುನ್ನೆಚರಿಕೆ ತೆಗೆದುಕೊಳ್ಳುವುದು ಸರಕಾರ ಮುಂದಿರುವ ಸವಾಲು ಎಂದು ಹಿಂದು ಸಂಪಾದಕೀಯ ಬರೆದಿದೆ.

Followers

ಓದಿದ್ದು ಕೇಳಿದ್ದು ನೋಡಿದ್ದು

ಇತ್ತೀಚೆಗೆ ಬಂದವರು

Blog Action Day

Search This Blog

Blog Archive

Snap Shots

Get Free Shots from Snap.com

Twitter Updates

    follow me on Twitter

    ಕೆಂಡಸಂಪಿಗೆಯಲ್ಲಿ ಓಕೆನೋ!!!

    ಓದಿದ್ದು ಕೇಳಿದ್ದು ನೋಡಿದ್ದು

    ಓದಿದ್ದು ಕೇಳಿದ್ದು ನೋಡಿದ್ದು ಎಲ್ಲವನ್ನು ತಮ್ಮ ಬ್ಲಾಗಿನಲ್ಲಿ ದಾಖಲಿಸುತ್ತಾ ಬಂದಿದ್ದಾರೆ ಅಶೋಕ್. ಕಂಡಿದ್ದನ್ನು ಕಂಡ ಹಾಗೇ ಹೇಳುತ್ತಾ , ಅಲ್ಲಿ ಇಲ್ಲಿ ಓದಿದ್ದನ್ನು ಉದಾಹರಣೆಯಾಗಿ ವಿವರಿಸುತ್ತಾ, ನೋಡಿದ್ದರ ಬಗ್ಗೆ ಮಾತನಾಡುವ ಇವರು ಅಲ್ಲಲ್ಲಿ ಒಂದಿಷ್ಟು ಕ್ಯಾತೆ ತೆಗೆದಿದ್ದಾರೆ. ಪ್ರತಿ ಬರಹಕ್ಕೂ ಒಂದೊಂದು ವ್ಯಂಗ್ಯಚಿತ್ರ ಹಾಕಿದ್ದಾರೆ. ಬಿಗ್ ಬ್ಯಾಂಗ್ ನ ವದಂತಿಯಿಂದ ಹಿಡಿದು ಯಡ್ಡಿ ಸರ್ಕಾರದ ಶತದಿನದ ಸಂಭ್ರಮದವರೆಗೆ ಕೊಂಕು ಹುಡುಕಿ, ಅದಕ್ಕೊಂದು ಕೊಂಡಿ ಕೊಟ್ಟಿದ್ದಾರೆ. ಇದನ್ನೆಲ್ಲ ನೋಡಬೇಕಿದ್ದವರು ಒಮ್ಮೆ ಹೋಗಿ ಬನ್ನಿ.