ಪಟಾಕಿ ಸುಟ್ಟು ದೀಪಾವಳಿ ಆಚರಿಸುವುದು ನಮ್ಮ ಸಂಪ್ರದಾಯ. ಹಿಂದೆ ಆ ರೀತಿಯ ಆಚರಣೆ ಹೆಚ್ಚೇನೂ ಸಮಸ್ಯೆ ಒಡ್ಡುತ್ತಿರಲಿಲ್ಲ. ಆದರೀಗ ನಗರಗಳಲ್ಲಿ ಜನಸಂದಣಿಯೋ ಜನಸಂದಣಿ.ವಾಹನ,ಕೈಗಾರಿಕೆಗಳು ಉಂಟು ಮಾಡುವ ಮಾಲಿನ್ಯವೇ ನಗರವಾಸಿಗಳಿಗೆ ಸಾಕಷ್ಟು ಸಮಸ್ಯೆ ತರುತ್ತದೆ.ಅದಕ್ಕೆ ಈ ಪಟಾಕಿಗಳ ಒಗ್ಗರಣೆಯನ್ನೂ ಸೇರಿಸುವ ಅಗತ್ಯವಿದೆಯೇ? ಪಟಾಕಿ ಸಿಡಿಸಿದಾಗ ಉಂಟಾಗುವ ಕಸ,ಪಟಾಕಿ ಪ್ಯಾಕಿಂಗ್‌ಗೆ ಬಳಸಿದ ಪ್ಲಾಸ್ಟಿಕ್,ಇತ್ಯಾದಿಗಳ ಕಸ ಇವೆಲ್ಲವೂ ನಗರವಾಸಿಗಳ ಮೇಲೆ ಇನ್ನೂ ಒತ್ತಡ ತರುತ್ತದೆ.
ನೆರೆ ಪೀಡಿತ ಜನರ ಅಳಲು ಒಂದು ಕಡೆ ಇದೆ. ಪ್ರಕೃತಿ ಈ ರೀತಿ ಮುನಿಯಲು ಪರಿಸರದ ಬಗ್ಗೆ ನಮ್ಮ ನಿಷ್ಕಾಳಜಿಯೇ ಕಾರಣವಾಗಿರಬಹುದು.ಈಗಲಾದರು ಎಚ್ಚೆತ್ತುಕೊಂಡು, ನಾವು ದೀಪಾವಳಿಯನ್ನು ಹೆಚ್ಚಿನ ಸಂಭ್ರಮವಿಲ್ಲದೆ,ಸಾಂಪ್ರದಾಯಿಕ ಆಚರಣೆಗಳೊಂದಿಗೆ ಆಚರಿಸೋಣ. ಪರಿಸರಕ್ಕೆ ಇನ್ನಷ್ಟು ಹಾನಿಯಾಗುವುದನ್ನು ತಡೆಯೋಣ. ಆಗದೇ?
ಸರಿಯಾಗಿ ಹೇಳಿದಿರಿ ಸರ್.. ದೀಪಾವಳಿ ಅಂದರೆ ದೀಪಗಳ ಹಬ್ಬ. ಪಟಾಕಿ ಸಿಡಿಸೊ ಹಬ್ಬ ಅಲ್ಲ ಶಬ್ದಗಳ ಹಬ್ಬ ಕೂಡಾ ಅಲ್ಲ.. ಅಲ್ಲವೆ ?
ReplyDelete